Saturday, July 14, 2007
ನಟೀಮಣಿಯ ಪರಿಚಯ
ಒಮ್ಮೆ ಖ್ಯಾತ ಬಿಚ್ಚೋ(ಲೆ) ಗೌರಮ್ಮ ನಟೀಮಣಿಯೊಬ್ಬಳು ಬೆಂಗಳೂರಿನ ಖ್ಯಾತ ಸಿಲ್ಕ್ ಶೋರೂಮಿಗೆ ಭೇಟಿ ನೀಡಿದಳು. ತನ್ನನ್ನು ಎಲ್ಲರೂ ಗುರುತು ಹಿಡಿಯಬಹುದು, ಆಟೋಗ್ರಾಫ್ ಕೇಳಬಹುದು, ಅಂಗಡಿಯಲ್ಲಿ ತನಗೆ ವಿಶೇಷ ಉಪಚಾರ ದೊರೆಯಬಹುದು ಎಂದೆಲ್ಲ ಆಕೆ ಅಂದುಕೊಂಡಿದ್ದಳು. ಆದರೆ ಯಾರೂ ಆಕೆಯನ್ನು ಗುರುತೇ ಹಿಡಿಯಲಿಲ್ಲ. ಆಕೆಗೆ ಇದರಿಂದ ತುಂಬ ಬೇಸರವಾಯಿತು. ತನ್ನನ್ನು ತುಂಬ ಜನಪ್ರಿಯ ನಟಿ ಅಂದುಕೊಂಡಿದ್ದು ಬರಿಯ ಸುಳ್ಳೇ ಅಂದು ತಿಳಿದು ಆಕೆಗೆ ಬಲು ದುಃಖವಾಯಿತು. ಆಕೆ ತನಗೆ ಬೇಕಾದ ಸೀರೆಯನ್ನು ಆಯ್ಕೆ ಮಾಡಿ ದುಡ್ಡು ಕೊಟ್ಟು ಹೊರಟಳು. ಅಂಗಡಿಯಿಂದ ಕೆಳಗೆ ಮೆಟ್ಟಿಲುಗಳಲ್ಲಿ ಇಳಿಯುತ್ತಿದ್ದಾಗ ಆಕೆ ಕಾಲು ಜಾರಿ ಬಿದ್ದಳು. ಆಗ ಆಕೆಯ ಸೀರೆ ಸರಿಸಲ್ಪಟ್ಟು ಆಕೆಯ ಕಾಲಿನ ಬಹುಭಾಗ ಎಲ್ಲರಿಗೂ ಕಾಣಿಸಿತು. ಇದ್ದಕ್ಕಿದ್ದಂತೆ ಎಲ್ಲರೂ "ಹ್ಹೋ, ಇವಳು .... ಸ್ಟಾರ್ ಅಲ್ಲವೇ? ನಮಗೆ ಗೊತ್ತೇ ಆಗಿರಲಿಲ್ಲ" ಎಂದು ಆಶ್ಚರ್ಯ ಪಟ್ಟುಕೊಂಡು ಎಲ್ಲರೂ ಆಕೆಯ ಸಹಾಯಕ್ಕೆ ಧಾವಿಸಿ ಬಂದರು.