Thursday, September 28, 2006

ಚಲ್ಲಣದೊಳಗೆ ತಲ್ಲಣ

ಹುಡುಗಿಯ ಬ್ರಾದೊಳಗಿಂದ ಪರ್ಸ್ ಹಣ ಕದ್ದಿದ್ದು ಆಕೆಗೆ ಗೊತ್ತಾಗಲಿಲ್ಲವೇ. ಹೋಗಲಿ. ಈ ಬಟ್ಟೆ ಅಲುಗಾಡಿದಾಗಲೆಲ್ಲ ಆಕೆಯ ಮನೆಯವ್ರಿಗೆ ಗೊತ್ತಾಗುವಂತಿದ್ಡರೆ ಚೆನ್ನಾಗಿತ್ತಲ್ಲವೆ? ಹೌದು. ಈಗ ಅಂತಹ ತಂತ್ರಜ್ಞಾನವೂ ಬಂದಿದೆ. ತೊಟ್ಟ ಬಟ್ಟೆ ಅಲುಗಾಡಿದಾಗಲೆಲ್ಲ ಸಿಗ್ನಲ್ ಕಳುಹಿಸುವಂತಹ ಬಟ್ಟೆ ತಯಾರಾಗಿದೆ. ಅದರ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ಇನ್ನು ಮುಂದೆ ಯುವತಿಯರ ಅಪ್ಪಂದಿರು ಆಕೆಗೆ ಎಂತಹ ಬಟ್ಟೆ ಹೊಲಿಸುತ್ತಾರೆಂದು ಗೊತ್ತಾಯಿತು ತಾನೆ?

Thursday, September 14, 2006

ಮಲ್ಲಿಕಾ ಶೆರಾವತ್

ಪ್ರ: ಮಲ್ಲಿಕಾ ಶೆರಾವತ್‌ಗೆ ಶಿಕ್ಷೆಯಾದರೆ ಏನು ಶಿಕ್ಷೆ ಕೊಡಬಹುದು?
ಉ: ಪೂರ್ತಿ ಬಟ್ಟೆ ಹಾಕಿಕೊಂಡಿರುವುದು.

ಪ್ರ: ಮಲ್ಲಿಕಾ ಶೆರಾವತ್ ಮತ್ತು ಸಲ್ಮಾನ್ ಖಾನ್ ಮದುವೆಯಾದರೆ?
ಉ: ಟೈಲರ್ ಮತ್ತು ಧೋಬಿಗೆ ಕೆಲಸವಿಲ್ಲ.

ಪ್ರ: ಸೊಳ್ಳೆಗಳಿಗೆ ಮಲ್ಲಿಕಾ ಶೆರಾವತ್ ತುಂಬ ಇಷ್ಟ. ಯಾಕೆ?
ಉ: ಅತಿ ಕಡಿಮೆ ಬಟ್ಟೆ ತೊಡುವುದರಿಂದ ಆಕೆಯನ್ನು ಎಲ್ಲಿ ಬೇಕಾದರೂ ಕಡಿಯುವುದು ಸುಲಭ.

ಎಸ್‌ಎಂಎಸ್‌:
1. ನಿನ್ನ ಚಿಂತೆಗಳು ಮಲ್ಲಿಕಾ ಶೆರವಾತ್ ಡ್ರೆಸ್ ತರಹ ಕಡಿಮೆಯಾಗಲಿ.
2. ದೇವರೇ ಮುಂದಿನ ಜನ್ಮದಲ್ಲಿ ನನ್ನನ್ನು ಸೊಳ್ಳೆಯನ್ನಾಗಿ ಮಾಡು. ಆಗ ಮಲ್ಲಿಕಾಳ ಮೈಮೇಲೆ ಕಳಿತುಕೊಳ್ಳಬಹುದು.

Wednesday, September 13, 2006

ಸುಖದ ಬೀಜ

ಒಮ್ಮೆ ಲಂಕಾಧೀಶ ರಾವಣನ ಆಸ್ಥಾನಕ್ಕೆ ನಾರದ ಬಂದ. ನಾರದ ರಾವಣನಲ್ಲಿ ಉಭಯಕುಶಲೋಪರಿ ವಿಚಾರಿಸಿದ. ರಾವಣನೆಂದ "ನಾರದರೇ, ನನಗೆ ಸಕಲೈಶ್ವರ್ಯಗಳೂ ಇವೆ. ಆದರೆ ಸುಖ ಎಂಬುದೇ ಇಲ್ಲ. ಸ್ವಲ್ಪ ಸುಖ ದೊರಕಿಸಿಕೊಡುತ್ತೀರಾ?".
"ಅದಕ್ಕೇನಂತೆ, ಇನ್ನೊಂದು ಸಲ ಬಂದಾಗ ತರುತ್ತೇನೆ"

ಸುಮಾರು ತಿಂಗಳುಗಳ ನಂತರ ನಾರದರು ಬಂದು ರಾವಣನಿಗೆ ಯಾವುದೋ ಒಂದು ತರಕಾರಿಯ ಬೀಜವನ್ನು ಕೊಟ್ಟರು. ರಾವಣನೆಂದ "ಇದನ್ನು ತಿನ್ನಬೇಕೆ?"
"ಇಲ್ಲ. ಇದನ್ನು ಬಿತ್ತು. ಅದು ಗಿಡವಾಗಲಿ. ನಂತರ ಅದರಲ್ಲಿ ಬೆಳೆಯುವ ತರಕಾರಿಯನ್ನು ದಿನಕ್ಕೆ ಮೂರು ಸಲ ಅಡುಗೆ ಮಾಡಿ ತಿನ್ನು. ಬೇರೆ ಯಾವುದೇ ತರಕಾರಿ ತಿನ್ನಬೇಡ"

ರಾವಣ ಹಾಗೆಯೇ ಮಾಡಿದ. ಸುಮಾರು ತಿಂಗಳುಗಳ ನಂತರ ನಾದರರು ಪುನ ಬಂದರು. "ಹೇಗಿದೆಯಪ್ಪ ಈಗ?ಸುಖ ದೊರೆಯಿತೇ?". ನಾರದರ ಪ್ರಶ್ನೆಗೆ ರಾವಣ ತುಂಬ ಬೇಸರದಿಂದ ಉತ್ತರಿಸಿದ "ಎಲ್ಲಿಯ ಸುಖ? ನನಗಂತೂ ಮೈಯೆಲ್ಲ ತುರಿಸುತ್ತ ಇದೆ. ಇದಕ್ಕೇನು ಪರಿಹಾರ?"
"ಅಲ್ಲಿಯೇ ಇದೆ ನೋಡು ಸುಖ. ಈಗ ಮೈಯೆಲ್ಲ ತುರಿಸುತ್ತಿದೆ ತಾನೆ? ಬಚ್ಚಲುಮನೆಗೆ ಹೋಗಿ ಮೈಗೆ ಬಿಸಿ ಬಿಸಿ ನೀರು ಹೊಯ್ದುಕೋ. ಆಗ ಸುಖ ಎಂದರೆ ಏನು ಗೊತ್ತಾಗುತ್ತದೆ ನೋಡು"

ನಿಮಗೆ ಯಾರಿಗ್ಯಾದರೂ ಅದು ಯಾವ ತರಕಾರಿ ಎಂದು ಗೊತ್ತಾಯಿತೇ? ಇಲ್ಲವೇ? ನಾನೆ ಹೇಳಿಬಿಡಲೇ? ಅದು ಬದನೆ ಸ್ವಾಮಿ!!!

(ಪಾವೆಂ ಅವರಿಂದ ಕದ್ದದ್ದು)

Saturday, September 09, 2006

ಕತ್ತೆಗಳು ಹೆಂಡ ಕುಡಿಯುವುದಿಲ್ಲ

ಒಬ್ಬ ಪಾದ್ರಿ ಹೆಂಡದ ದುಷ್ಪರಿಣಾಮಗಳ ಬಗ್ಗೆ ಭಾಷಣ ಬಿಗಯುತ್ತಿದ್ದ. ಕೊನೆಗೆ ಒಂದು ಪ್ರಯೋಗ ಮಾಡಿ ತೋರಿಸಿದ. ಒಂದು ಬಾಲ್ದಿಯಲ್ಲಿ ಹೆಂಡ ತುಂಬಿಸಿದ. ಒಂದು ಕತ್ತೆಯನ್ನು ತಂದು ಆ ಬಾಲ್ದಿಯ ಮುಂದೆ ನಿಲ್ಲಿಸಿದ. ಕತ್ತೆ ಬಾಲ್ದಿಯಲ್ಲಿರುವ ದ್ರಾವಣವನ್ನು ಮೂಸಿ ನೋಡಿತು. ಅದನ್ನು ಕುಡಿಯಲಿಲ್ಲ. ಮುಖ ತಿರುಗಿಸಿ ಹೋಯಿತು.

ಆಗ ಪಾದ್ರಿ ಅಲ್ಲಿ ನೆರೆದಿದ್ದ ಜನರನ್ನು ಕೇಳಿದ "ಈ ಪ್ರಯೋಗದಿಂದ ನೀವು ಏನು ತಿಳಿಯಬಹುದು?"

ಹಿಂದೆ ಕುಳಿತಿದ್ದ ಒಬ್ಬಾತ ಹೇಳಿದ "ಕತ್ತೆಗಳು ಹೆಂಡ ಕುಡಿಯುವುದಿಲ್ಲ"

Thursday, September 07, 2006

ಚಿನ್ನದ ಕಮೋಡ್

ಒಮ್ಮೆ ಲಾಲೂ ಮತ್ತು ರಾಬ್ರಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಅವರ ಮನೆಗೆ ಹೋಗಿದ್ದರು. ಬುಶ್, ಶ್ರೀಮತಿ ಬುಶ್, ಲಾಲೂ ಮತ್ತು ರಾಬ್ರಿ ಚರ್ಚೆಯಲ್ಲಿ ನಿರತರಾದರು. ಮಧ್ಯದಲ್ಲಿ ಒಮ್ಮೆ ಲಾಲೂಗೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬಂತು. ಬುಶ್‌ಗೆ ಹೇಳಿದರು. "ಟಾಯ್ಲೆಟ್ ತೋರಿಸಲು ಬರಲೆ" ಎಂದು ಬುಶ್ ಕೇಳಿದಾಗ ಲಾಲೂ ಅವರು "ಬೇಕಾಗಿಲ್ಲ, ನಾನೇ ಹಡುಕಿಕೊಳ್ಳುತ್ತೇನೆ" ಎಂದು ಹುಡುಕುತ್ತ ಹೊರಟರು. ಕೆಲಸ ಮುಗಿಸಿ ಬಂದು ಕುಳಿತು ಮಾತುಕತೆ ಮುಂದುವರಿಸಿದರು.

ಮರುದಿನ ಮಾತನಾಡುತ್ತ ಲಾಲೂ ರಾಬ್ರಿಗೆ ಹೇಳಿದರು "ಬುಶ್ ಮನೆಯಲ್ಲಿ ಚಿನ್ನದ ಕಮೋಡ್ ಇದೆ ಗೊತ್ತಾ?". ರಾಬ್ರಿಗೆ ನಂಬಿಕೆ ಬರಲಿಲ್ಲ. ಶ್ರೀಮತಿ ಬುಶ್‌ಗೆ ಫೋನಾಯಿಸಿ ಕೇಳಿದರು "ಹೌದೆ? ನಿಮ್ಮ ಮನೆಯಲ್ಲಿ ಚಿನ್ನದ ಕಮೋಡ್ ಇದೆಯೇ?". ಶ್ರೀಮತಿ ಬುಶ್ ಏನೋ ಸಬೂಬು ಹೇಳಿ ಕೂಡಲೆ ಫೋನು ಕೆಳಗಿಟ್ಟರು. ನಂತರ ಬುಶ್‌ರನ್ನು ಕೂಗಿ ಹೇಳಿದರು "ನಿನ್ನೆ ರಾತ್ರಿ ನಮ್ಮ ಸ್ಯಾಕ್ಸೋಫೋನಿನಲ್ಲಿ ಮೂತ್ರ ಹೊಯ್ದದ್ದು ಯಾರು ಎಂದು ಗೊತ್ತಾಯಿತು".

ಹೆಂಡ್ಕುಡ್ಕ ಕಾರು

ನಾನಂತೂ ಹೆಂಡ್ಕುಡ್ಕ. ಅದು ನಿಮ್ಗೂ ಗೊತ್ತು. ಆದ್ರೆ ನನ್ನ ಕಾರು? ಸದ್ಯಕ್ಕಂತೂ ಅದು ಪೆಟ್ರೋಲು ಕುಡಿಯುತ್ತೆ. ಆದ್ರೆ ಹೆಂಡ? ಹೌದ್ರೀ. ಸದ್ಯದಲ್ಲೇ ಹೆಂಡ್ಕುಡ್ಕ ಕಾರುಗಳು ಬರಲಿವೆ. ಅದು ನಿಮ್ಗೆ ಗೊತ್ತಾ? ಇಲ್ವೇ? ಹಂಗಿದ್ರೆ ಈ ಲೇಖನ ಓದಿ. ಆದ್ರೆ ಸದ್ಯಕ್ಕೆ ಈ ಹೆಂಡ್ಕುಡ್ಕ ಕಾರು ಬೇಕಿದ್ರೆ ಇಟಾಲಿಗೇ ಹೋಗ್ಬೇಕು. ನಾನಂತೂ ರೆಡಿ. ಆದ್ರೆ ಈ ದರಿದ್ರ ಸರ್ಕಾರದವ್ರು ಬಿಡ್ಬೇಕಲ್ಲ. ಹೆಂಡ್ಕುಡ್ಕರಿಗೆ ವೀಸಾ ಕೊಡೊಲ್ಲ ಅಂತಾರಲ್ಲ. ನೀವ್ಯಾರಾದ್ರೂ ಅವ್ರಿಗೆ ಬುದ್ಧಿ ಹೇಳ್ರೀ.

Wednesday, September 06, 2006

ಪರ್ಸ್ ಇಟ್ಟಿದ್ದೆಲ್ಲಿ?

ಮೂವರು ಹುಡುಗಿಯರು ಸಿನಿಮಾ ನೋಡಲು ಹೋಗಿದ್ದರು. ಒಬ್ಬಳ ಪಕ್ಕ ಯಾರೊ ಹುಡುಗ ಕುಳಿತಿದ್ದ. ಸಿನಿಮಾ ಮುಗಿದು ಮನೆಗೆ ವಾಪಾಸು ಹೋಗುತ್ತಿದ್ದಾಗ, ಹುಡುಗನ ಪಕ್ಕ ಕುಳಿತಿದ್ದ ಹುಡುಗಿ ಹೇಳಿದಳು "ನನ್ನ ಪರ್ಸ್ ಕಳವಾಯಿತು".
ಇನ್ನಿಬ್ಬರು ಕೇಳಿದರು "ಹೌದೆ? ಯಾವಾಗ?".
"ಸಿನಿಮಾ ನೋಡುತ್ತಿದ್ದಾಗ".
"ಪರ್ಸ್ ಎಲ್ಲಿಟ್ಟಿದ್ದೆ?"
"ಇಲ್ಲಿ" ಎಂದು ಎದೆ ತೋರಿಸಿದಳು. ಹುಡುಗಿಯರು ಎಲ್ಲಿ ಹಣ, ಪರ್ಸ್ ಇಡುತ್ತಾರೆ ಗೊತ್ತು ತಾನೆ?
"ಅಲ್ಲಿಂದ ಪರ್ಸ್ ತೆಗೆಯುವಾಗ ನಿನಗೆ ಗೊತ್ತೇ ಆಗಲಿಲ್ಲವೇ?"
"ನನಗೇನು ಗೊತ್ತಿತ್ತು. ಆತ ಪರ್ಸ್ ಕದಿಯಲು ಕೈಹಾಕಿದ್ದು ಎಂದು?"

ಟಶ್ಯೂ ಪೇಪರ್ ಕೊಳ್ಳೋದೆಂಗೆ

ಒಮ್ಮೆ ಸಂತಾ ಸಿಂಗ್‌ಗೆ ನಾಯಿ ಬಿಸ್ಕಟ್ ಬೇಕಿತ್ತು. ಅಂಗಡಿಗೆ ಹೋದ. ನಾಯಿ ಬಿಸ್ಕಟ್ ಕೇಳಿದ. ಅಂಗಡಿಯಾತ ಹೇಳಿದ -"ನಿನ್ನಲ್ಲಿ ನಾಯಿ ಇದೆ ಎಂದು ನಮಗೆ ಖಾತರಿ ಆದರೆ ಮಾತ್ರ ನೀವು ನಾಯಿ ಬಿಸ್ಕಟ್ ಕೊಳ್ಳಬಹುದು. ಆದುದರಿಂದ ನಿಮ್ಮ ನಾಯಿಯನ್ನು ತಂದು ತೋರಿಸಿ". ಸಂತಾ ಸಿಂಗ್‌ಗೆ ಬೇರೆ ದಾರಿಯೇ ಇರಲಿಲ್ಲ. ಮನೆಗೆ ಹೋಗಿ ನಾಯಿಯನ್ನು ಜೊತೆ ಕರೆದುಕೊಂಡು ಬಂದು ಬಿಸ್ಕಟ್ ಕೊಂಡುಕೊಂಡ.

ಒಂದು ವಾರದ ನಂತರ ಸಂತಾ ಸಿಂಗ್ ಅಂಗಡಿಗೆ ಒಂದು ಪ್ಲಾಸ್ಟಿಕ್ ಚೀಲದೊಂದಿಗೆ ಬಂದ. ಅಂಗಡಿಯಾತನಿಗೆ ತನ್ನ ಚೀಲದೊಳಕ್ಕೆ ಕೈಹಾಕಲು ಹೇಳಿದ. ಅಂಗಡಿಯಾಥ ಕೇಳಿದ ಯಾಕೆ ಎಂದು. ಸಂತಾ ಸಿಂಗ್ ಕಾರಣ ಹೇಳಲು ಒಪ್ಪಲಿಲ್ಲ. ಮದಲು ಕೈಹಾಕು ಎಂದ. ಅಂಗಡಿಯಾತ ಕೈಹಾಕಿ ಸಿಟ್ಟಿನಲ್ಲಿ ಕೇಳಿದ "ಏನಿದು ಹುಡಗಾಟ ಆಡ್ತಿದ್ದೀಯಾ?". ಸಂತಾ ಸಿಂಗ್ ಕೂಲಾಗಿ ಹೇಳಿದ "ನನಗೆ ಟಿಶ್ಯೂ ಪೇಪರ್ ಬೇಕಿತ್ತು".

ಸ್ಟಪ್ನಿ ಕಳ್ಳರು

ನಾನೊಮ್ಮೆ ಈ ರವೀಂದ್ರ ಕಲಾಕ್ಷೇತ್ರ ಅನ್ನೋ ಜಾಗ ಇದ್ಯಲ್ಲ ಅದ್ರ ಸೈಡ್ನಲ್ಲಿ ನನ್ ಸ್ಕೂಟರ್ ಇಟ್ಟಿದ್ದೆ. ಅಂಗೆ ಅಲ್ಲಿ ಹಿಂದಾಗಡೆ ನಡೀತಿದ್ದ ಯಾವ್ದೋ ಕ್ನನಡ ಹಾಡ್‌ಗಳ ಕಾರ್ಯಕ್ರಮ ಕೇಳ್ತಿದ್ದೆ. ಕಾರ್ಯಕ್ರಮ ಬೋ ಚೆನ್ನಾಗಿತ್ತು. ಹಂಗೇ ಕೇಳಿ ಕೇಳಿ ನಂತ್ರ ಬಂದೆ. ಬಂದ್ ನೋಡ್ತೀನಿ. ನನ್ ಸ್ಕೂಟರ್‌ನ ಸ್ಟಪ್ನಿನ ಯಾವನೊ ಕದ್ದೊಯ್ದಿದ್ದ. ಅಲ್ಲರೀ ಹಿಂಗಾ ಮಾಡೋದು? ಕನ್ನಡ ಕಾರ್ಯಕ್ರಮಗೋಳಿಗೆ ಜನಾನೇ ಬರ್ತಾ ಇಲ್ಲ ಅಂತೆಲ್ಲ ಕೂಗಾಡುವಾಗ ನನ್ನಂತೋರು ಬಂದ್ರೆ ಸ್ಟೆಪ್ನೀನೇ ಕದ್ಬಿಡೋದಾ? ಛೇ ಛೇ. ಎಂಥ ಅನ್ಯಾಯ. ಅಂಗೆ ಅಲ್ಲಿದ್ದೋರತ್ರ ಮಾತಾಡ್ತಿದ್ದೆ. ಒಬ್ರಂದ್ರು "ಇದೇನು ಇಲ್ಲಿ ಹೊಸದಲ್ಲ ಸಾರ್. ಕಲಾವಿದ್ರೆಲ್ಲ ಕಡಿಮೆ ಅಂದ್ರೂ ಒಂದು ಸ್ಟೆಪ್ನಿ ಇಟ್ಕೊಂಡಿರೋರು. ಕಲಾಕ್ಷೇತ್ರದ ಹಿಂದಾಗಡೆ ನೋಡಿ. ಯಾವಗ್ಲೂ ಈ ಕಲಾವಿದ್ರ ಮತ್ತವ್ರ ಸ್ಟೆಪ್ನಿಗಳ ಚಕ್ಕಂದ ನಡೀತರ್ತವೆ. ಒಬ್ರ ಸ್ಟೆಪ್ನಿ ಇನ್ನೊಬ್ರು ಎಗರ್ಸಕೊಂಡು ಹೋಗೋದು ಇಲ್ಲಿ ಮಾಮೂಲು ಸಾರ್. ಇವೊತ್ತು ನಿಮ್ಮ್ ಸ್ಟೆಪ್ನಿ ಎಗರ್ಸಿದ್ದಾರೆ. ಅಷ್ಟೆ. ನೀವೊಂದು ಕೆಲ್ಸ ಮಾಡಿ. ನೀವೂ ಇನ್ಯಾರ್ದಾದ್ರು ಸ್ಟೆಪ್ನಿ ಎಗ್ರಸ್ಬಿಡ್ರಿ". ಏನು ಕಲಿಗಾಲ ಬಂತೂಂತೀನಿ. ನೀವಾದ್ರೂ ಸ್ವಲ್ಪ ಹೇಳ್ರಿ.

ಬಿಲ್ ಗೇಟ್ಸ್ ಮತ್ತು ಮೈಕ್ರೋ ಸಾಫ್ಟ್

ಪ್ರಶ್ನೆ: ಬಿಲ್ ಗೇಟ್ಸ್‌ನ ಹೆಂಡತಿ ಆಕೆಯ ಮದುವೆಯ ಪ್ರಥಮರಾತ್ರಿ ಏನನ್ನು ಪತ್ತೆಹಚ್ಚಿದಳು?
ಉತ್ತರ: ಆತನ ಕಂಪೆನಿಯ ಹೆಸರು ಮೈಕ್ರೋ ಸಾಫ್ಟ್ ಎಂದಿರುವುದು ಯಾಕೆ ಎಂದು.

ಅಮಲಿಗರಿಗೆ ಸ್ವಾಗತ

ಎಂಡ ಮೌಸ್ ಬ್ಲಾಗುಗಳೆಂದ್ರೆ
ಪಬ್‌ರತ್ನಂಗ್ ಪ್ರಾಣ
ಎಂಡ ಕುಡ್ದ್ ಕುಟ್ದಾಂದ್ರೆ
ತಕ್ಕೊ ಪದಗಳ್ ಬಾಣ

ಕನ್ನಡದ ವಿನೂತನ ಬ್ಲಾಗಿಗೆ ಸ್ವಾಗತ.

-ಪಬ್ ರತ್ನ

This page is powered by Blogger. Isn't yours?