Wednesday, September 13, 2006

ಸುಖದ ಬೀಜ

ಒಮ್ಮೆ ಲಂಕಾಧೀಶ ರಾವಣನ ಆಸ್ಥಾನಕ್ಕೆ ನಾರದ ಬಂದ. ನಾರದ ರಾವಣನಲ್ಲಿ ಉಭಯಕುಶಲೋಪರಿ ವಿಚಾರಿಸಿದ. ರಾವಣನೆಂದ "ನಾರದರೇ, ನನಗೆ ಸಕಲೈಶ್ವರ್ಯಗಳೂ ಇವೆ. ಆದರೆ ಸುಖ ಎಂಬುದೇ ಇಲ್ಲ. ಸ್ವಲ್ಪ ಸುಖ ದೊರಕಿಸಿಕೊಡುತ್ತೀರಾ?".
"ಅದಕ್ಕೇನಂತೆ, ಇನ್ನೊಂದು ಸಲ ಬಂದಾಗ ತರುತ್ತೇನೆ"

ಸುಮಾರು ತಿಂಗಳುಗಳ ನಂತರ ನಾರದರು ಬಂದು ರಾವಣನಿಗೆ ಯಾವುದೋ ಒಂದು ತರಕಾರಿಯ ಬೀಜವನ್ನು ಕೊಟ್ಟರು. ರಾವಣನೆಂದ "ಇದನ್ನು ತಿನ್ನಬೇಕೆ?"
"ಇಲ್ಲ. ಇದನ್ನು ಬಿತ್ತು. ಅದು ಗಿಡವಾಗಲಿ. ನಂತರ ಅದರಲ್ಲಿ ಬೆಳೆಯುವ ತರಕಾರಿಯನ್ನು ದಿನಕ್ಕೆ ಮೂರು ಸಲ ಅಡುಗೆ ಮಾಡಿ ತಿನ್ನು. ಬೇರೆ ಯಾವುದೇ ತರಕಾರಿ ತಿನ್ನಬೇಡ"

ರಾವಣ ಹಾಗೆಯೇ ಮಾಡಿದ. ಸುಮಾರು ತಿಂಗಳುಗಳ ನಂತರ ನಾದರರು ಪುನ ಬಂದರು. "ಹೇಗಿದೆಯಪ್ಪ ಈಗ?ಸುಖ ದೊರೆಯಿತೇ?". ನಾರದರ ಪ್ರಶ್ನೆಗೆ ರಾವಣ ತುಂಬ ಬೇಸರದಿಂದ ಉತ್ತರಿಸಿದ "ಎಲ್ಲಿಯ ಸುಖ? ನನಗಂತೂ ಮೈಯೆಲ್ಲ ತುರಿಸುತ್ತ ಇದೆ. ಇದಕ್ಕೇನು ಪರಿಹಾರ?"
"ಅಲ್ಲಿಯೇ ಇದೆ ನೋಡು ಸುಖ. ಈಗ ಮೈಯೆಲ್ಲ ತುರಿಸುತ್ತಿದೆ ತಾನೆ? ಬಚ್ಚಲುಮನೆಗೆ ಹೋಗಿ ಮೈಗೆ ಬಿಸಿ ಬಿಸಿ ನೀರು ಹೊಯ್ದುಕೋ. ಆಗ ಸುಖ ಎಂದರೆ ಏನು ಗೊತ್ತಾಗುತ್ತದೆ ನೋಡು"

ನಿಮಗೆ ಯಾರಿಗ್ಯಾದರೂ ಅದು ಯಾವ ತರಕಾರಿ ಎಂದು ಗೊತ್ತಾಯಿತೇ? ಇಲ್ಲವೇ? ನಾನೆ ಹೇಳಿಬಿಡಲೇ? ಅದು ಬದನೆ ಸ್ವಾಮಿ!!!

(ಪಾವೆಂ ಅವರಿಂದ ಕದ್ದದ್ದು)

Comments: Post a Comment



<< Home

This page is powered by Blogger. Isn't yours?