Saturday, July 14, 2007

ನಟೀಮಣಿಯ ಪರಿಚಯ

ಒಮ್ಮೆ ಖ್ಯಾತ ಬಿಚ್ಚೋ(ಲೆ) ಗೌರಮ್ಮ ನಟೀಮಣಿಯೊಬ್ಬಳು ಬೆಂಗಳೂರಿನ ಖ್ಯಾತ ಸಿಲ್ಕ್ ಶೋರೂಮಿಗೆ ಭೇಟಿ ನೀಡಿದಳು. ತನ್ನನ್ನು ಎಲ್ಲರೂ ಗುರುತು ಹಿಡಿಯಬಹುದು, ಆಟೋಗ್ರಾಫ್ ಕೇಳಬಹುದು, ಅಂಗಡಿಯಲ್ಲಿ ತನಗೆ ವಿಶೇಷ ಉಪಚಾರ ದೊರೆಯಬಹುದು ಎಂದೆಲ್ಲ ಆಕೆ ಅಂದುಕೊಂಡಿದ್ದಳು. ಆದರೆ ಯಾರೂ ಆಕೆಯನ್ನು ಗುರುತೇ ಹಿಡಿಯಲಿಲ್ಲ. ಆಕೆಗೆ ಇದರಿಂದ ತುಂಬ ಬೇಸರವಾಯಿತು. ತನ್ನನ್ನು ತುಂಬ ಜನಪ್ರಿಯ ನಟಿ ಅಂದುಕೊಂಡಿದ್ದು ಬರಿಯ ಸುಳ್ಳೇ ಅಂದು ತಿಳಿದು ಆಕೆಗೆ ಬಲು ದುಃಖವಾಯಿತು. ಆಕೆ ತನಗೆ ಬೇಕಾದ ಸೀರೆಯನ್ನು ಆಯ್ಕೆ ಮಾಡಿ ದುಡ್ಡು ಕೊಟ್ಟು ಹೊರಟಳು. ಅಂಗಡಿಯಿಂದ ಕೆಳಗೆ ಮೆಟ್ಟಿಲುಗಳಲ್ಲಿ ಇಳಿಯುತ್ತಿದ್ದಾಗ ಆಕೆ ಕಾಲು ಜಾರಿ ಬಿದ್ದಳು. ಆಗ ಆಕೆಯ ಸೀರೆ ಸರಿಸಲ್ಪಟ್ಟು ಆಕೆಯ ಕಾಲಿನ ಬಹುಭಾಗ ಎಲ್ಲರಿಗೂ ಕಾಣಿಸಿತು. ಇದ್ದಕ್ಕಿದ್ದಂತೆ ಎಲ್ಲರೂ "ಹ್ಹೋ, ಇವಳು .... ಸ್ಟಾರ್ ಅಲ್ಲವೇ? ನಮಗೆ ಗೊತ್ತೇ ಆಗಿರಲಿಲ್ಲ" ಎಂದು ಆಶ್ಚರ್ಯ ಪಟ್ಟುಕೊಂಡು ಎಲ್ಲರೂ ಆಕೆಯ ಸಹಾಯಕ್ಕೆ ಧಾವಿಸಿ ಬಂದರು.

Friday, March 16, 2007

ಸಾರಾಯಿ ನಿಷೇಧಕ್ಕೆ ನಮ್ಮ ವಿರೋಧ

ಕರ್ನಾಟಕ ಸರಕಾರವು ಸಾರಾಯಿಯನ್ನು ನಿಷೇಧಿಸಲು ಹೊರಟಿರುವುದನ್ನು ಪಬ್ಬಿಗರ ಸಂಘ ತೀವ್ರವಾಗಿ ಪ್ರತಿಭಟಿಸುತ್ತಿದೆ. ಅದಕ್ಕೆ ಕಾರಣಗಳೆಂದರೆ-


Thursday, March 08, 2007

ಹೊಸ ಸೇವಾ ತೆರಿಗೆಗಳು

ತಭಾರ ಸರಕಾರದ ಹದೇಲಿಪುರದಲ್ಲಿ ನೆಲೆಸಿರುವ ಪಿತ್ತ ಸಚಿವ ಚಿಂದಿ ಅಂಬರಂ ಅವರು ಇತ್ತೀಚೆಗಷ್ಟೆ ತಮ್ಮ ಆಯವ್ಯಯಪತ್ರ ಮಂಡಿಸಿದರು. ಅದರಲ್ಲಿ ಹಲವು ಸೇವೆಗಳಿಗೆ ಸೇವಾತೆರಿಗೆ ವಿಧಿಸಿದ್ದಾರೆ. ನಿನ್ನೆ ನಡೆದ ಗೋಪ್ಯ ಸಭೆಯಲ್ಲಿ ಇನ್ನೂ ಕೆಲವು ಸೇವೆಗಳನ್ನು ಈ ಸೇವಾತೆರಿಗೆಯ ವ್ಯಾಪ್ತಿಗೆ ತರಲು ನಿರ್ಧರಿಸಲಾಯಿತು ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿದೆ. ಅವುಗಳೆಂದರೆ -

ಸದ್ಯದಲ್ಲೇ ಹೊರಡಿಸಲಿರುವ ಬೆತ್ತಲೆ ಪತ್ರದಲ್ಲಿ (ಶ್ವೇತಪತ್ರದಂತೆ) ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ತಿಳಿದುಬಂದಿಲ್ಲ. ಈ ಎಲ್ಲ ಸೇವೆ ನೀಡುವ ಮಂದಿ ತಮ್ಮ ತಮ್ಮ ಸೇವೆಗಳನ್ನು ನೋಂದಾಯಿಸಕೊಳ್ಳುವಂತೆ ಸೂಚಿಸಲಾಗಿದೆ.


ಬೀರು ಕ್ಯಾನ್ ಎಸೆಯುವ ಫ್ರಿಜ್

ಫ್ರಿಜ್‌ನಲ್ಲಿ ಬಿಯರ್ ಬಾಟಲಿ, ಕ್ಯಾನ್ ಇಡುವುದು ಗೊತ್ತಿದೆ. ಬೀರು ಹೀರಬೇಕೆಂದಾಗೆಲ್ಲ ಎದ್ದು ಹೋಗುವುದು ಬೋರಿನ ಕೆಲಸ. ಅದೂ ಎಂಡ್ಕುಡ್ಕರಿಗೆ ಖಂಡಿತ ಬೋರು. ಇದಕ್ಕೂ ಒಬ್ಬ ಎಂಡ್ಕುಡ್ಕರು ಪರಿಹಾರ ಕಂಡು ಹುಡುಕಿದ್ದಾರೆ. ಅದೆಂದರೆ ಕುಳಿತಲ್ಲಿಗೆ ಬಿಯರ್ ಕ್ಯಾನನ್ನು ಫ್ರಿಜ್ ಎಸೆಯುವುದು. ಇದರ ಬಗ್ಗೆ ಹೆಚ್ಚಿನಬ ವಿವರ ಇಲ್ಲಿ ಓದಬಹುದು.

Thursday, December 07, 2006

ಚೌಕಾಸಿ

ಒಬ್ಬ ಸ್ಮಾರ್ಟ್ ಯುವಕ ಪಾರ್ಕಿನಲ್ಲಿ ವಾಕಿಂಗ್ ಮಾಡುತ್ತಿದ್ದ. ಬೆಂಚಿನಲ್ಲಿ ಕುಳಿತಿದ್ದ ಚಂದದ ಯುವತಿ ಆತನ ಕಣ್ಣಿಗೆ ಬಿದ್ದಳು. ಕಣ್ಣಿಗೆ ಹೇಗೆ ಬಿದ್ದಳು ಎಂದು ಕೇಳಬೇಡಿ. ಹಾಗೆ ಬರೆಯುವುದು ವಾಡಿಕೆ, ಅಷ್ಟೆ. ಆತನಿಗೆ ಒಂದು ಚೇಷ್ಟೆ ಮಾಡುವ ಆಲೋಚನೆ ಬಂತು. ಹುಡುಗಿಯ ಬಳಿಗೆ ಬಂದು ಹೇಳಿದ -
"ನಾನು ಈ ಮಾತನ್ನು ಹೇಳುತ್ತಿರುವುದು ಕೇವಲ ಆದರೆ ಹೋದರೆ ಪ್ರಪಂಚದಲ್ಲಿ. ಅದನ್ನು ಸೀರಿಯಸ್ ಆಗಿ ತಗೋಬಾರದು. ಎರಡು ಕೋಟಿ ರೂಪಾಯಿ ಸಿಗುವಂತಿದ್ದರೆ ನೀವು ವ್ಯಭಿಚಾರ ಮಾಡಲು ತಯಾರಿದ್ದೀರಾ? ಇದು ಕೇವಲ ಆದರೆ ಹೋದರೆ ಎಂದು ಕೇಳುತ್ತಿರುವುದು. ಸೀರಿಯಸ್ ಆಗಿ ಅಲ್ಲ".
ಆಕೆ ಹೇಳಿದಳು "ಮಾಡಿದರೂ ಮಾಡಬಹುದು".
"ಎರಡು ನೂರು ರೂಪಾಯಿಗೆ ಬರುತ್ತೀಯಾ?"
ಆಕೆಗೆ ಭಯಂಕರ ಸಿಟ್ಟು ಬಂದು ಹೇಳಿದಳು "ನನ್ನನ್ನು ನೀವು ಏನು ಎಂದು ತಿಳಿದುಕೊಂಡಿದ್ದೀರಾ?"
"ನೀನು ಏನು ಎಂಬುದು ತೀರ್ಮಾನವಾಗಿದೆ. ಈಗ ನಾನು ಕೇವಲ ಬೆಲೆ ಚೌಕಾಸಿ ಮಾಡುತ್ತಿದ್ದೇನೆ, ಅಷ್ಟೆ."

Thursday, November 30, 2006

ಏಡ್ಸ್ ಹೇಗೆ ಪ್ರಾರಂಭವಾಯಿತು?

ಇಂದು (ಡಿ.1) ವಿಶ್ವ ಏಡ್ಸ್ ದಿನ. ಹಾಗೆಂದರೇನು? ಇಂದು ಎಲ್ಲರೂ ಏಡ್ಸ್ ಹೊಂದಬೇಕು ಎಂದೇ? ಗೊತ್ತಿಲ್ಲ. ಎಲ್ಲ ಪತ್ರಿಕೆಯವರಂತೆ ಏಡ್ಸ್ ಬಗ್ಗೆ ನಮ್ಮ ಬೊಗಳೆ ರಗಳೆ ಬ್ಯೂರೋದವರು ಕೂಡ ಒಂದು ಫೀಚರ್ ಮಾಡಿದ್ದಾರೆ. ಆದರೆ ಅವರು ಒಂದು ಬುಹು ಮುಖ್ಯವಾದ ವಿಷಯವನ್ನೇ ಬಿಟ್ಟುಬಿಟ್ಟಿದ್ದಾರೆ. ಅದು ಏಡ್ಸ್ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ. ಅಮೇರಿಕದ ವಿಜ್ಞಾನಿಗಳು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೇನೆಂದರೆ ಏಡ್ಸ್ ಆಫ್ರಿಕಾದಲ್ಲಿ ಪ್ರಾರಂಭವಾಗಿ ವಿಶ್ವಕ್ಕೆಲ್ಲ ಹಬ್ಬಿತು ಎಂದು. ಈ ಹೇಳಿಕೆಯನ್ನು ಆಫ್ರಿಕಾದ ಜನರು ಖಂಡತುಂಡವಾಗಿ ಖಂಡಿಸಿದ್ದಾರೆ. ಅವರ ಪ್ರಕಾರ "ಅಮೇರಿಕದವರು ತೃತೀಯ ಜಗತ್ತಿನ ದೇಶಗಳಿಗೆ ಮಾಡುತ್ತಿರುವುದನ್ನೇ ಜನರು ಒಬ್ಬರಿಗೊಬ್ಬರು ಮಾಡತೊಡಗಿದಾಗ ಏಡ್ಸ್ ಪ್ರಾರಂಭವಾಯಿತು".

Sunday, November 26, 2006

ಸರಕಾರ ಸೈಕಲ್ ಕೊಡಿಸಿದ್ದೇಕೆ?

ಕರ್ನಾಟಕ ಸರಕಾರವು ಮೊದಲು ಬಾಲಿಕೆಯರುಗಳಿಗೆ ಸೈಕಲ್ ನೀಡಿತ್ತು. ನತರ ಬಾಲಕರುಗಳಿಗೂ ಸೈಕಲ್ ನೀಡಿತ್ತು. ಇದರ ಬಗ್ಗೆ ಬೊಗಳೆ ರಗಳೆಯ ಏಕಸದಸ್ಯ ಬ್ಯೂರೋವು ತನಿಖೆ ಮಾಡಿ ವರದಿ ಸಲ್ಲಿಸಿತ್ತು. ಆದರೆ ನಾವು ಇನ್ನೂ ವಿಶೇಷ ತನಿಖೆ ನಡೆಸಿದಾಗ ಎರಡು ಭಯಂಕರ ಸತ್ಯಸಂಗತಿಗಳು ಹೊರಬಿದ್ದವು. ಮೊದಲನೆಯದು ಬೊಗಳೆ ರಗಳೆ ಬ್ಯೂರೋದ ತನಿಖಾ ಸದಸ್ಯರು ತನಿಖೆಯನ್ನೇ ನಡೆಸಲಿಲ್ಲ; ಬದಲಿಗೆ ಅವರು ಬೆಂಗಳೂರಿನ ಮಬ್ಬುಗತ್ತಲಿನ ಪಬ್ಬೊಂದರಲ್ಲಿ ಕುಳಿತು ಬಿಯರ್ ಹೀರುತ್ತ ಬರೆದ ತನಿಖಾ ವರದಿ ಆಗಿತ್ತದು ಎಂಬುದು. ಎರಡನೆಯ ಇನ್ನಷ್ಟು ಭಯಂಕರ ಸತ್ಯವೇನೆಂದರೆ ಕರ್ನಾಟಕ ಸರಕಾರವು ಸೈಕಲ್ ಕೊಡಿಸಿದ್ದು ಮಿತಿಮೀರುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಎಂಬುದು. ನಮ್ಮ ಸರಕಾರಗಳು ಎಷ್ಟೇ ಯೋಜನೆ ಕಾರ್ಯಕ್ರಮಗಳನ್ನು ಹಾಕಿಕೊಂಡರೂ ಜನಸಂಖ್ಯೆ ನಿಯಂತ್ರಣಕ್ಕೆ ಬರುತ್ತಿಲ್ಲ. ಏರುತ್ತಲೇ ಇದೆ. ಇದನ್ನು ನಿಯಂತ್ರಣಕ್ಕೆ ತರಲು ಇರುವ ಏಕೈಕ ಉಪಾಯವೆಂದರೆ ಜನರಲ್ಲಿ ಲೈಂಗಿಕ ಆಸಕ್ತಿಯನ್ನು ಕಡಿಮೆ ಮಾಡುವುದು. ಸೈಕಲ್ ತುಳಿಯುವುದರಿಂದ ಜನರಲ್ಲಿ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತದೆ ಎಂದು ನ್ಯೂಯಾರ್ಕ್ ಟೈಮ್ಸ್‌ ವರದಿ ಮಾಡಿದೆ. ಬೊಗಳೆ ರಗಳೆ ಬ್ಯೂರೋದ ಸದಸ್ಯರ ಗಮನಕ್ಕೆ ಈ ವಿಷಯ ಬರಬಾರದೆಂದೇ ಅವರಿಗೆ ಪಬ್ಬಿನಲ್ಲಿ ಹೆಂಡ ಕುಡಿಸಲಾಗಿತ್ತು ಎಂಬ ಮೂರನೆಯ ಅತಿ ಭಯಂಕರ ಸತ್ಯವನ್ನೂ ನಮ್ಮ ಸೊನ್ನೆ ಸದಸ್ಯ ಬ್ಯೂರೋ ಪತ್ತೆಹಚ್ಚಿದೆ.

Monday, November 20, 2006

ಹೊಸ ಬೈಕ್

ಸಂತಾ ಮತ್ತು ಬಂತಾ ಒಂದೇ ಆಫೀಸಿನಲ್ಲಿ ಕೆಲಸ ಮಾಡುವವರು. ದಿನಾ ಜೊತೆಯಲ್ಲಿ ಬಸ್ಸಿನಲ್ಲಿ ಹೋಗುವವರು. ಒಂದು ದಿನ ಸಂತಾ ಬಸ್ಸಿಗೆ ಕಾಯುತ್ತಿದ್ದಾಗ ಬಂತಾ ಹೊಸ ಬೈಕಿನಲ್ಲಿ ಬಂದ. ಸಂತಾಗೆ ಆಶ್ಚರ್ಯವಾಯಿತು. "ಇದು ಯಾವಾಗ ಹೊಸ ಬೈಕು ತೆಗೆದುಕೊಂಡೆ" ಎಂದು ಕೇಳಿದ. ಬಂತಾ ಹೇಳಿದ "ಲಾಟರಿ ಹೊಡೆಯಿತು".
"ಹೌದೇ? ಹೇಗೆ? "
"ನಿನ್ನೆ ರಾತ್ರಿ ಪಾರ್ಟಿ ಮುಗಿಸಿ ಹೊರಡುವಾಗ ತುಂಬ ರಾತ್ರಿ ಆಗಿತ್ತು. ಯಾವ ಬಸ್ಸೂ ಸಿಗಲಿಲ್ಲ. ಆಗ ಒಂದು ಬೈಕ್ ಬಂತು. ಲಿಫ್ಟ್ ಬೇಕಾ ಎಂದು ಕೇಳಿತು. ಬೈಕಿನಲ್ಲಿ ಹಿಂದೆ ಕುಳಿತು ಹೋಗುತ್ತಿದ್ದಾಗ ಗೊತ್ತಾಯಿತು, ಬೈಕಿನಲ್ಲಿದ್ದದ್ದು ಹೆಣ್ಣು ಎಂದು. ಆಕೆ ಒಂದು ನಿರ್ಜನ ಪ್ರದೇಶದಲ್ಲಿ ಬೈಕು ನಿಲ್ಲಿಸಿದಳು. ತನ್ನೆಲ್ಲಾ ಬಟ್ಟೆ ಕಳಚಿ ಇಟ್ಟಳು. ನಂತರ ಹೇಳಿದಳು -ಎಲ್ಲ ನಿನ್ನದೇ. ಏನು ಬೇಕೊ ತೆಗೆದುಕೊ. ನಾನು ಬೈಕು ತೆಗೆದುಕೊಂಡು ಬಂದೆ"
"ನೀನು ಮಾಡಿದ್ದು ಸರಿಯಾಗಿದೆ. ಹೆಣ್ಣಿನ ಬಟ್ಟೆ ತೆಗೆದುಕೊಂಡು ನಮಗೇನು ಪ್ರಯೋಜನ?"

This page is powered by Blogger. Isn't yours?