Wednesday, September 06, 2006

ಸ್ಟಪ್ನಿ ಕಳ್ಳರು

ನಾನೊಮ್ಮೆ ಈ ರವೀಂದ್ರ ಕಲಾಕ್ಷೇತ್ರ ಅನ್ನೋ ಜಾಗ ಇದ್ಯಲ್ಲ ಅದ್ರ ಸೈಡ್ನಲ್ಲಿ ನನ್ ಸ್ಕೂಟರ್ ಇಟ್ಟಿದ್ದೆ. ಅಂಗೆ ಅಲ್ಲಿ ಹಿಂದಾಗಡೆ ನಡೀತಿದ್ದ ಯಾವ್ದೋ ಕ್ನನಡ ಹಾಡ್‌ಗಳ ಕಾರ್ಯಕ್ರಮ ಕೇಳ್ತಿದ್ದೆ. ಕಾರ್ಯಕ್ರಮ ಬೋ ಚೆನ್ನಾಗಿತ್ತು. ಹಂಗೇ ಕೇಳಿ ಕೇಳಿ ನಂತ್ರ ಬಂದೆ. ಬಂದ್ ನೋಡ್ತೀನಿ. ನನ್ ಸ್ಕೂಟರ್‌ನ ಸ್ಟಪ್ನಿನ ಯಾವನೊ ಕದ್ದೊಯ್ದಿದ್ದ. ಅಲ್ಲರೀ ಹಿಂಗಾ ಮಾಡೋದು? ಕನ್ನಡ ಕಾರ್ಯಕ್ರಮಗೋಳಿಗೆ ಜನಾನೇ ಬರ್ತಾ ಇಲ್ಲ ಅಂತೆಲ್ಲ ಕೂಗಾಡುವಾಗ ನನ್ನಂತೋರು ಬಂದ್ರೆ ಸ್ಟೆಪ್ನೀನೇ ಕದ್ಬಿಡೋದಾ? ಛೇ ಛೇ. ಎಂಥ ಅನ್ಯಾಯ. ಅಂಗೆ ಅಲ್ಲಿದ್ದೋರತ್ರ ಮಾತಾಡ್ತಿದ್ದೆ. ಒಬ್ರಂದ್ರು "ಇದೇನು ಇಲ್ಲಿ ಹೊಸದಲ್ಲ ಸಾರ್. ಕಲಾವಿದ್ರೆಲ್ಲ ಕಡಿಮೆ ಅಂದ್ರೂ ಒಂದು ಸ್ಟೆಪ್ನಿ ಇಟ್ಕೊಂಡಿರೋರು. ಕಲಾಕ್ಷೇತ್ರದ ಹಿಂದಾಗಡೆ ನೋಡಿ. ಯಾವಗ್ಲೂ ಈ ಕಲಾವಿದ್ರ ಮತ್ತವ್ರ ಸ್ಟೆಪ್ನಿಗಳ ಚಕ್ಕಂದ ನಡೀತರ್ತವೆ. ಒಬ್ರ ಸ್ಟೆಪ್ನಿ ಇನ್ನೊಬ್ರು ಎಗರ್ಸಕೊಂಡು ಹೋಗೋದು ಇಲ್ಲಿ ಮಾಮೂಲು ಸಾರ್. ಇವೊತ್ತು ನಿಮ್ಮ್ ಸ್ಟೆಪ್ನಿ ಎಗರ್ಸಿದ್ದಾರೆ. ಅಷ್ಟೆ. ನೀವೊಂದು ಕೆಲ್ಸ ಮಾಡಿ. ನೀವೂ ಇನ್ಯಾರ್ದಾದ್ರು ಸ್ಟೆಪ್ನಿ ಎಗ್ರಸ್ಬಿಡ್ರಿ". ಏನು ಕಲಿಗಾಲ ಬಂತೂಂತೀನಿ. ನೀವಾದ್ರೂ ಸ್ವಲ್ಪ ಹೇಳ್ರಿ.

Comments: Post a Comment



<< Home

This page is powered by Blogger. Isn't yours?