Thursday, October 26, 2006

ಬಟನ್ ಮುಗಿದಾಗ

ಸಂತಾ ಸಿಂಗ್ ಬಸ್ಸಿಗೆ ಕ್ಯೂ ನಿಂತಿದ್ದ. ಆತನ ಮುಂದೆ ಒಂದು ಸ್ಮಾರ್ಟ್ ಹುಡುಗಿ ಬಿಗಿ ಸ್ಕರ್ಟ್ ಧರಿಸಿ ನಿಂತಿದ್ದಳು. ಅದರ ಹಿಂದುಗಡೆ ಮೇಲಿನಿಂದ ಕೊನೆ ತನಕ ಬಟನ್‌ಗಳಿದ್ದವು. ಬಸ್ಸು ಬಂತು. ಆಕೆ ಕಾಲೆತ್ತಿ ಬಸ್ಸಿಗೆ ಹತ್ತಲು ಹೊರಟಳು. ಆದರೆ ಬಿಗಿ ಸ್ಕರ್ಟಿನಿಂದಾಗಿ ಆಕೆಗೆ ಕಾಲೆತ್ತಲು ಆಗಲಿಲ್ಲ. ಆಕೆ ಹಿಂದೆ ಕೈಹಾಕಿ ಒಂದು ಬಟನ್ ತೆರೆದಳು. ಪುನಃ ಕಾಲಿಡಲು ಹೊರಟಾಗ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಹಿಂದೆ ಕೈಹಾಕಿ ಮತ್ತೊಂದು ಬಟನ್ ತೆರೆದಳು. ಪುನಃ ಕಾಲಿಡಲು ಹೊರಟಾಗ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಹಿಂದೆ ಕೈಹಾಕಿ ಮತ್ತೊಂದು ಬಟನ್ ತೆರೆದಳು. ಪುನಃ ಕಾಲೆತ್ತಿ ಇಡಲು ಹೊರಟಾಗ ಆಗಲೂ ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಹಿಂದೆ ಕೈಹಾಕಹೊರಟಳು. ಅಷ್ಟರಲ್ಲಿ ಸಂತಾ ಸಿಂಗ್ ಆಕೆಯನ್ನು ಎತ್ತಿ ಬಸ್ಸಿನೊಳಗೆ ಇಟ್ಟ. ಆತನ ಈ ಕ್ರಿಯೆಗೆ ಆಕೆ ತೀವ್ರವಾಗಿ ಪ್ರತಿಭಟಿಸಿದಳು. ಆಗ ಸಂತಾ ಸಿಂಗ್ ಕೂಲಾಗಿ ಹೇಳಿದ "ಮೇಡಂ, ನನ್ನ ಪ್ಯಾಂಟಿಗೆ ಇದ್ದ ಮೂರೂ ಬಟನ್‌ಗಳನ್ನು ನೀವು ತೆರೆದು ಬಿಟ್ಟಿದ್ದಿರಿ. ಅದಕ್ಕೆ ನಾನು ಹೀಗೆ ಮಾಡಿದ್ದು".

Wednesday, October 18, 2006

ದೀಪಾವಳಿ ಉಡುಗೊರೆ

ದೀಪಾವಳಿ ಮತ್ತೊಮ್ಮೆ ಬಂದಿದೆ. ಕೆಲವು ಗಣ್ಯರಿಗೆ ನಾನು ಕೊಡಲು ತೀರ್ಮಾನಿಸಿರುವ ಉಡುಗೊರೆಗಳು:

ಮಲ್ಲಿಕಾ ಶೆರಾವತ್: ಒಂಬತ್ತು ಮೊಳದ ಜರತಾರಿ ಸೀರೆ, ಕುಪ್ಪಸ ಮತ್ತು ಒಳ ಉಡುಪುಗಳು
ಸಲ್ಮಾನ್ ಖಾನ್: ಅಂಗಿ
ದೇವೇಗೌಡ: ತಲೆದಿಂಬು
ಜನಾರ್ಧನ ರೆಡ್ಡಿ: ಸಿ.ಡಿ ರೈಟರ್
ಅರುಂಧತಿ ರಾಯ್: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಟಿಕೆಟ್
ಲಾಲೂ ಯಾದವ್: ಲ್ಯಾಪ್‌ಟಾಪ್
ರಾಖಿಸಾವಂತ್: ಬುರ್ಖ
ಅಸತ್ಯಾನ್ವೇಶಿ: ಭೂತಕನ್ನಡಿ
ಬೃಂದಾ ಕಾರಟ್: ಚ್ಯವನಪ್ರಾಶ ಹಾಗೂ ಪ್ರಾಣಾಯಾಮ ಮತ್ತು ಯೋಗಾಸನದ ಸಿ.ಡಿ.ಗಳು

Sunday, October 01, 2006

ವಯಾಗ್ರ - ವೈರಾಗ್ಯ

ಪ್ರ: ವಯಾಗ್ರ ತೆಗೆದುಕೊಂಡೂ ಗುಣ ಕಾಣದ ರೋಗಿಗೆ ಮುಂದಿನ ಗತಿ ಏನು?
ಉ: ವೈರಾಗ್ಯ

80 ವರ್ಷ ಪ್ರಾಯದ ಒಬ್ಬ ಅಜ್ಜ ಔಷಧದ ಅಂಗಡಿಗೆ ಬಂದು ವಯಾಗ್ರ ಕೇಳಿದ. ಅಂಗಡಿಯಾತ ಕಟ್ಟಿಕೊಡಲು ಹೊರಟಾಗ ಅಜ್ಜ ಹೇಳಿದ "ಅವುಗಳನ್ನು 4 ತುಂಡುಗಳಾಗಿ ಮಾಡಿಕೊಡು". ಅಂಗಡಿಯಾತ ಹೇಳಿದ "ಅದರಿಂದ ಏನೂ ಪ್ರಯೋಜನವಿಲ್ಲ". ಅಜ್ಜ ಉತ್ತರಿಸಿದ "ನಂಗೊತ್ತು. ವಯಾಗ್ರ ನನಗೆ ಬೇಕಾಗಿರುವುದು ನೀನು ಅಂದುಕೊಂಡಿರುವುದಕ್ಕಲ್ಲ. ನನಗೆ ಮೂತ್ರ ಹೊಯ್ಯುವಾಗ ನನ್ನ ಕಾಲಿನ ಮೇಲೆ ಬೀಳಬಾರದು. ಅಷ್ಟೆ."


ವಯಾಗ್ರ ವೈರಸ್ ಗೊತ್ತೆ? ಅದು ನಿಮ್ಮ ಫ್ಲಾಪಿಯನ್ನು ಹಾರ್ಡ್ ಡಿಸ್ಕ್ ಆಗಿ ಪರಿವರ್ತಿಸುತ್ತದೆ.


ಮೈಕ್ರೋ ಸಾಫ್ಟ್ ಅವರು ವಯಾಗ್ರ ಕೊಳ್ಳುತ್ತಿದ್ದಾರೆ ಎಂದು ನಂಬಲನರ್ಹ ಮೂಲಗಳಿಂದ ತಿಳಿದುಬಂದಿಲ್ಲ.

ಈಗಷ್ಟೆ ಬಂದಿದೆ -ವಯಾಗ್ರ ಲೈಟ್. ಅದು ಮುಷ್ಟಿಮೈಥುನ ಮಾಡಿಕೊಳ್ಳುವವರಿಗೆ.

ವಯಾಗ್ರ ತಿಂದು ಕೆಲಸ ಮುಗಿಯುವ ಮೊದಲೆ ಸತ್ತ ವ್ಯಕ್ತಿ ಗೊತ್ತೆ? ಆತನ ಶವ ಪೆಟ್ಟಿಗೆಗೆ ಮುಚ್ಚಳ ಹಾಕಲು ಅಸಾಧ್ಯವಾಗಿ ಕೊನೆಗೆ ಏನು ಮಾಡಿದರು ಗೊತ್ತೆ? ಮುಚ್ಚಳದ ಮಧ್ಯದಲ್ಲೇ ಉಬ್ಬಿರುವಂತೆ ವಿನ್ಯಾಸ ಮಾಡಲಾಯಿತು.

ವಯಾಗ್ರಕ್ಕೂ ಭಾರತಕ್ಕೂ ಇರುವ ನಂಟು ಗೊತ್ತೆ? ವೈ ಆಗ್ರ ಎಂಬುದೇ ವಯಾಗ್ರ ಆಯಿತಂತೆ. ಶಾಹಜಾನನ ಕಾಲದಲ್ಲಿ ವಯಾಗ್ರ ಇದ್ದಿದ್ದರೆ ಮಮತಾಜ ಸಾಯುತ್ತಿರಲಿಲ್ಲ ಮತ್ತು ತಾಜಮಹಾಲ್ ಕಟ್ಟಿಸಬೇಕಾಗಿರಲಿಲ್ಲ ಎಂಬುದು ಬರಿಯ ಕುಹಕದ ಮಾತು.

ಮಹಾಭಾರತದ ಕಾಲದಲ್ಲಿ ವಯಾಗ್ರ ಇದ್ದಿದ್ದರೆ? ಪಾಂಡು ಕಾಡಿಗೆ ಹೋಗಬೇಕಾಗಿರಲಿಲ್ಲ. ದೇವೇಂದ್ರಾದಿ ದೇವತೆಗಳಿಗೆ ಚಾನ್ಸೂ ಸಿಗುತ್ತಿರಲಿಲ್ಲ.

This page is powered by Blogger. Isn't yours?