Thursday, September 07, 2006

ಚಿನ್ನದ ಕಮೋಡ್

ಒಮ್ಮೆ ಲಾಲೂ ಮತ್ತು ರಾಬ್ರಿ ಅಮೆರಿಕದ ಅಧ್ಯಕ್ಷ ಜಾರ್ಜ್ ಬುಶ್ ಅವರ ಮನೆಗೆ ಹೋಗಿದ್ದರು. ಬುಶ್, ಶ್ರೀಮತಿ ಬುಶ್, ಲಾಲೂ ಮತ್ತು ರಾಬ್ರಿ ಚರ್ಚೆಯಲ್ಲಿ ನಿರತರಾದರು. ಮಧ್ಯದಲ್ಲಿ ಒಮ್ಮೆ ಲಾಲೂಗೆ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬಂತು. ಬುಶ್‌ಗೆ ಹೇಳಿದರು. "ಟಾಯ್ಲೆಟ್ ತೋರಿಸಲು ಬರಲೆ" ಎಂದು ಬುಶ್ ಕೇಳಿದಾಗ ಲಾಲೂ ಅವರು "ಬೇಕಾಗಿಲ್ಲ, ನಾನೇ ಹಡುಕಿಕೊಳ್ಳುತ್ತೇನೆ" ಎಂದು ಹುಡುಕುತ್ತ ಹೊರಟರು. ಕೆಲಸ ಮುಗಿಸಿ ಬಂದು ಕುಳಿತು ಮಾತುಕತೆ ಮುಂದುವರಿಸಿದರು.

ಮರುದಿನ ಮಾತನಾಡುತ್ತ ಲಾಲೂ ರಾಬ್ರಿಗೆ ಹೇಳಿದರು "ಬುಶ್ ಮನೆಯಲ್ಲಿ ಚಿನ್ನದ ಕಮೋಡ್ ಇದೆ ಗೊತ್ತಾ?". ರಾಬ್ರಿಗೆ ನಂಬಿಕೆ ಬರಲಿಲ್ಲ. ಶ್ರೀಮತಿ ಬುಶ್‌ಗೆ ಫೋನಾಯಿಸಿ ಕೇಳಿದರು "ಹೌದೆ? ನಿಮ್ಮ ಮನೆಯಲ್ಲಿ ಚಿನ್ನದ ಕಮೋಡ್ ಇದೆಯೇ?". ಶ್ರೀಮತಿ ಬುಶ್ ಏನೋ ಸಬೂಬು ಹೇಳಿ ಕೂಡಲೆ ಫೋನು ಕೆಳಗಿಟ್ಟರು. ನಂತರ ಬುಶ್‌ರನ್ನು ಕೂಗಿ ಹೇಳಿದರು "ನಿನ್ನೆ ರಾತ್ರಿ ನಮ್ಮ ಸ್ಯಾಕ್ಸೋಫೋನಿನಲ್ಲಿ ಮೂತ್ರ ಹೊಯ್ದದ್ದು ಯಾರು ಎಂದು ಗೊತ್ತಾಯಿತು".

Comments:
ಓ.... ಪಬ್ಬಿನಲ್ಲಿದ್ದರೂ ಎಂಡ್ಕುಡಿಯೋದಿಕ್ಕೆ ಹೊರಟ ಮತ್ತು ಬೊಗಳಿಗರಿಗೆ ಅಮಲೇರಿಸ ಹೊರಟವರೇ....

ನಿಮ್ಮ ಪಬ್ ಚೆನ್ನಾಗಿಯೇ ಅರಳಿದೆ... ಅಡಗಿಸಿಟ್ಟಿದ್ದೀರಾ...
ನಮಗೂ ದಿನಕ್ಕೊಂದು ಕ್ವಾರ್ಟರ್ ಕೊಡಿಸಿ...
 
ಈಗಾಗಲೆ ಒಂದು ಕ್ವಾರ್ಟರ್ ಕೊಟ್ಟಿದ್ದೇನಲ್ಲ?
 
Post a Comment



<< Home

This page is powered by Blogger. Isn't yours?