Wednesday, October 18, 2006

ದೀಪಾವಳಿ ಉಡುಗೊರೆ

ದೀಪಾವಳಿ ಮತ್ತೊಮ್ಮೆ ಬಂದಿದೆ. ಕೆಲವು ಗಣ್ಯರಿಗೆ ನಾನು ಕೊಡಲು ತೀರ್ಮಾನಿಸಿರುವ ಉಡುಗೊರೆಗಳು:

ಮಲ್ಲಿಕಾ ಶೆರಾವತ್: ಒಂಬತ್ತು ಮೊಳದ ಜರತಾರಿ ಸೀರೆ, ಕುಪ್ಪಸ ಮತ್ತು ಒಳ ಉಡುಪುಗಳು
ಸಲ್ಮಾನ್ ಖಾನ್: ಅಂಗಿ
ದೇವೇಗೌಡ: ತಲೆದಿಂಬು
ಜನಾರ್ಧನ ರೆಡ್ಡಿ: ಸಿ.ಡಿ ರೈಟರ್
ಅರುಂಧತಿ ರಾಯ್: ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಟಿಕೆಟ್
ಲಾಲೂ ಯಾದವ್: ಲ್ಯಾಪ್‌ಟಾಪ್
ರಾಖಿಸಾವಂತ್: ಬುರ್ಖ
ಅಸತ್ಯಾನ್ವೇಶಿ: ಭೂತಕನ್ನಡಿ
ಬೃಂದಾ ಕಾರಟ್: ಚ್ಯವನಪ್ರಾಶ ಹಾಗೂ ಪ್ರಾಣಾಯಾಮ ಮತ್ತು ಯೋಗಾಸನದ ಸಿ.ಡಿ.ಗಳು

Comments:
ಪಬ್ಬೋತ್ತಮರೇ,
ಭೂತ ಕನ್ನಡಿಗಿಂತಲೂ ಭವಿಷ್ಯದ ಕನ್ನಡಿ ಕೊಟ್ಟಿದ್ದರೆ, ಈ ಲೋಕದ ಭೂತಗಳಿಂದ ತಪ್ಪಿಸಿಕೊಳ್ಳಬಹುದಿತ್ತು.... ಆದ್ರೂ ಕೊಟ್ಟಿದ್ದೀರಲ್ಲಾ.... ನೀವು ಕೊಟ್ಟ ಒಂದು ಪೆಗ್..... ಹತ್ತಾರು ಪೆಗ್‌ಆಗಿ ಕಾಣಿಸುತ್ತಿದೆ...!!!!
 
ಪಬ್ಬಿಗರೇ,
ದಯವಿಟ್ಟು ನಿಮ್ಮ ಉಡುಗೊರೆಯನ್ನು ಅಪ್ಪಿ ತಪ್ಪಿಯೂ ಅದಲುಬದಲು ಮಾಡಬೇಡಿ... ನಿಮ್ಮ ದಮ್ಮಯ್ಯ ಅಂತೀನಿ....
:)
 
aneshigaLa uDagare tuMba hidasittu re!!!! Deepavaliya shubhashayagalu
 
ಅನ್ವೇಷಿ,

ನಿಮಗೆ ಭೂತಕನ್ನಡಿ ಜೊತೆ ಒಂದು ದುರ್ಬೀನನ್ನೂ ಬೋನಸ್ ಆಗಿ ನೀಡಲು ನಮ್ಮ ಬಾರ್‌ಟೆಂಟರ್‌ಗಳು ತೀರ್ಮಾನಿಸಿದ್ದಾರೆ.
 
ಮಹಾ ಅಂತ ಈಶ ರೇ,

ನಿಮ್ಮ ಶುಭಾಶಯಗಳಿಗೆ ಧನ್ಯವಾದಗಳು. ಬನ್ನಿ, ಒಂದು ಪೆಗ್ ಜೊತೆಯಲ್ಲಿ ಹಾಕೋಣ.

-ಪಬ್
 
ಬಹಳ ತಮಾಷೆಯಾಗಿದೆ. ಪಟ್ಟಿಯನ್ನೂ ಇನ್ನೂ ಬೆಳೆಸಬಹುದಲ್ಲವೇ? ಓದುಗರಿಗೆ ಮನ ಮುದಗೊಳಿಸುವ ನಿಮ್ಮ ಪ್ರಯತ್ನ ಅನವರತ ನಡೆದಿರಲಿ.

ಒಳ್ಳೆಯದಾಗಲಿ
 
Post a Comment<< Home

This page is powered by Blogger. Isn't yours?