Thursday, October 26, 2006

ಬಟನ್ ಮುಗಿದಾಗ

ಸಂತಾ ಸಿಂಗ್ ಬಸ್ಸಿಗೆ ಕ್ಯೂ ನಿಂತಿದ್ದ. ಆತನ ಮುಂದೆ ಒಂದು ಸ್ಮಾರ್ಟ್ ಹುಡುಗಿ ಬಿಗಿ ಸ್ಕರ್ಟ್ ಧರಿಸಿ ನಿಂತಿದ್ದಳು. ಅದರ ಹಿಂದುಗಡೆ ಮೇಲಿನಿಂದ ಕೊನೆ ತನಕ ಬಟನ್‌ಗಳಿದ್ದವು. ಬಸ್ಸು ಬಂತು. ಆಕೆ ಕಾಲೆತ್ತಿ ಬಸ್ಸಿಗೆ ಹತ್ತಲು ಹೊರಟಳು. ಆದರೆ ಬಿಗಿ ಸ್ಕರ್ಟಿನಿಂದಾಗಿ ಆಕೆಗೆ ಕಾಲೆತ್ತಲು ಆಗಲಿಲ್ಲ. ಆಕೆ ಹಿಂದೆ ಕೈಹಾಕಿ ಒಂದು ಬಟನ್ ತೆರೆದಳು. ಪುನಃ ಕಾಲಿಡಲು ಹೊರಟಾಗ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಹಿಂದೆ ಕೈಹಾಕಿ ಮತ್ತೊಂದು ಬಟನ್ ತೆರೆದಳು. ಪುನಃ ಕಾಲಿಡಲು ಹೊರಟಾಗ ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಹಿಂದೆ ಕೈಹಾಕಿ ಮತ್ತೊಂದು ಬಟನ್ ತೆರೆದಳು. ಪುನಃ ಕಾಲೆತ್ತಿ ಇಡಲು ಹೊರಟಾಗ ಆಗಲೂ ಸಾಧ್ಯವಾಗಲಿಲ್ಲ. ಇನ್ನೊಮ್ಮೆ ಹಿಂದೆ ಕೈಹಾಕಹೊರಟಳು. ಅಷ್ಟರಲ್ಲಿ ಸಂತಾ ಸಿಂಗ್ ಆಕೆಯನ್ನು ಎತ್ತಿ ಬಸ್ಸಿನೊಳಗೆ ಇಟ್ಟ. ಆತನ ಈ ಕ್ರಿಯೆಗೆ ಆಕೆ ತೀವ್ರವಾಗಿ ಪ್ರತಿಭಟಿಸಿದಳು. ಆಗ ಸಂತಾ ಸಿಂಗ್ ಕೂಲಾಗಿ ಹೇಳಿದ "ಮೇಡಂ, ನನ್ನ ಪ್ಯಾಂಟಿಗೆ ಇದ್ದ ಮೂರೂ ಬಟನ್‌ಗಳನ್ನು ನೀವು ತೆರೆದು ಬಿಟ್ಟಿದ್ದಿರಿ. ಅದಕ್ಕೆ ನಾನು ಹೀಗೆ ಮಾಡಿದ್ದು".

Comments:
ಈ ಜೋಕನ್ನು ನಾನು ಬೊಂಬಾಯಿಯಲ್ಲಿ ಕೇಳಿದ್ದೆ.
 
ಪಬ್ ರತ್ನ ಅವರೆ
ಆಫೀಸ್ ಕಾರ್ಯ ನಿಮಿತ್ತ ಹೊರ ಊರಿನಲ್ಲಿದ್ದೇನೆ. ಇಲ್ಲಿನ ಆಫೀಸಲ್ಲಿ ಓರ್ಕುಟ್, ಜಿಮೇಲ್, ಯಾಹೂ ಎಲ್ಲವನ್ನೂ ಬ್ಲಾಕ್ ಮಾಡಿದ್ದಾರೆ.
ಹಾಗಾಗಿ ಸರಿ ಸುಮಾರು ಇನ್ನೊಂದು ತಿಂಗಳು ನಿಮಗೆ ಇನ್ವಿಟೇಶನ್ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಕ್ಷಮಿಸಿ.
(ನಿಮ್ಮ ಮೆಸೇಜ್ ಗೊತ್ತಾಗಿದ್ದು ಹೇಗೆಂದರೆ, ನನ್ನ ನನ್ನ ಬೇರೊಂದು ಮೇಲ್ ಐಡಿಗೆ ಜಿ-ಮೇಲ್ ಪತ್ರಗಳ ಫಾರ್ವರ್ಡ್‌ ಸೆಟ್ಟಿಂಗ್ ಮಾಡಿಕೊಂಡಿದ್ದೇನೆ)
ನೀವು ತವಿಶ್ರೀ ಅವರನ್ನು ಸಂಪರ್ಕಿಸಬಹುದಲ್ಲಾ?
 
ಸಂತಾ ಸಿಂಗನ ಜೋಕುಗಳೆಂದರೆ ಓದುವಂತದ್ದಲ್ಲವೆಂದು ತಿಳಿದಿದ್ದೆ. ಆದರೆ ಅದರಲ್ಲೂ ಮನಮುದಗೊಳಿಸುವಂತಹ ತಮಾಷೆ ಇದೆಯೆಂದು ತಿಳಿದೇ ಇರಲಿಲ್ಲ.

ಇದನ್ನು ನಾನೆಲ್ಲೂ ಕೇಳಿರಲೂ ಇಲ್ಲ, ಓದಿರಲೂ ಇಲ್ಲ. ಕೊಟ್ಟದ್ದಕ್ಕೆ ವಂದನೆಗಳು.

ನಿಮ್ಮ ಬ್ಲಾಗಿನ ಬಾಗಿಲನ್ನು ಇನ್ನು ಮೇಲೆ ಆಗಾಗ ಬಡಿಯುತ್ತಿರುತ್ತೇನೆ. ಕುಡುಕ ಅಂತ ಆಚೆಗೆ ತಳ್ಳಬೇಡಿ, ನಾನೂ ನಿಮ್ಮವನೇ!
 
ಪಬ್ ಅವರೇ,

ನಿಮ್ಮ ಪಬ್‍ಗೆ ಭೇಟಿ ಕೊಟ್ಟಾಗ ಮನಕ್ಕೆ ಖುಷಿ ಅನಿಸ್ತು ನೋಡ್ರೀ..ಹಿಂಗೆ ಯಾವಾಗಲೂ ಇರಲಿ ನಿಮ್ಮ ಬ್ಲಾಗ್ ಮತ್ತು!
 
ಶ್ರೀ ಶ್ರೀ ಶ್ರೀ ಸ್ವಾಮಿ ಮತ್ತು ಶಿವ್,

ಭೇಟಿ ನೀಡಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು. ನನ್ನ ಬ್ಲಾಗನ್ನು ಗಲೀಜೆಂದು ಹೀಗಳೆಯದೆ ಹೊಗಳಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

ಅನ್ವೇಶಿ,

ತವಿಶ್ರೀ ಮೂಲಕ ಓರ್ಕುಟ್‌ಗೆ ಪ್ರವೇಶಿಸಿದ್ದೇನೆ.
 
ಹಿಂಡೀ ಹಿಂಡೀ ಗುಂಡಿಯನ್ನು ಬಿಚ್ಚಿದವರಿಗೆ, ನೀವೇನಾರು; ನಿಮ್ ಪುಬ್ ನಲ್ಲಿ, ಎಂಡ ಕುಡ್ಸಿದ್ರ?

ಇಂತಿ
ಭೂತ
 
pub ravare, innu hasya chatakigalana bareire
 
Post a Comment



<< Home

This page is powered by Blogger. Isn't yours?