Thursday, November 30, 2006

ಏಡ್ಸ್ ಹೇಗೆ ಪ್ರಾರಂಭವಾಯಿತು?

ಇಂದು (ಡಿ.1) ವಿಶ್ವ ಏಡ್ಸ್ ದಿನ. ಹಾಗೆಂದರೇನು? ಇಂದು ಎಲ್ಲರೂ ಏಡ್ಸ್ ಹೊಂದಬೇಕು ಎಂದೇ? ಗೊತ್ತಿಲ್ಲ. ಎಲ್ಲ ಪತ್ರಿಕೆಯವರಂತೆ ಏಡ್ಸ್ ಬಗ್ಗೆ ನಮ್ಮ ಬೊಗಳೆ ರಗಳೆ ಬ್ಯೂರೋದವರು ಕೂಡ ಒಂದು ಫೀಚರ್ ಮಾಡಿದ್ದಾರೆ. ಆದರೆ ಅವರು ಒಂದು ಬುಹು ಮುಖ್ಯವಾದ ವಿಷಯವನ್ನೇ ಬಿಟ್ಟುಬಿಟ್ಟಿದ್ದಾರೆ. ಅದು ಏಡ್ಸ್ ಹೇಗೆ ಪ್ರಾರಂಭವಾಯಿತು ಎಂಬುದರ ಬಗ್ಗೆ. ಅಮೇರಿಕದ ವಿಜ್ಞಾನಿಗಳು ಹಲವು ವರ್ಷಗಳಿಂದ ಹೇಳಿಕೊಂಡು ಬಂದಿರುವುದೇನೆಂದರೆ ಏಡ್ಸ್ ಆಫ್ರಿಕಾದಲ್ಲಿ ಪ್ರಾರಂಭವಾಗಿ ವಿಶ್ವಕ್ಕೆಲ್ಲ ಹಬ್ಬಿತು ಎಂದು. ಈ ಹೇಳಿಕೆಯನ್ನು ಆಫ್ರಿಕಾದ ಜನರು ಖಂಡತುಂಡವಾಗಿ ಖಂಡಿಸಿದ್ದಾರೆ. ಅವರ ಪ್ರಕಾರ "ಅಮೇರಿಕದವರು ತೃತೀಯ ಜಗತ್ತಿನ ದೇಶಗಳಿಗೆ ಮಾಡುತ್ತಿರುವುದನ್ನೇ ಜನರು ಒಬ್ಬರಿಗೊಬ್ಬರು ಮಾಡತೊಡಗಿದಾಗ ಏಡ್ಸ್ ಪ್ರಾರಂಭವಾಯಿತು".

Comments:
ಪಬ್ಬಿಗರೇ,

ನಿಮ್ಮ ಕೊನೆ ಸಾಲು ಈಡೀ ಎಡ್ಸ್ ಮೂಲದ ಸಾರಂಶವನ್ನು ಹೇಳಿಬಿಡ್ತು :)
 
ನಾನು ಆ ವಾಕ್ಯವನ್ನು ಎಲ್ಲಿಂದಲೋ ಕದ್ದಿದ್ದು :)

-ಪಬ್
 
ಅದಿರ್ಲಿ, ಐಡ್ಸ್ ಮಂಗನಿಂದ ಮಾನವರಿಗೆ ಬಂತು ಎನ್ನುತ್ತಾರೆ. ಪ್ರಪ್ರಥಮವಾಗಿ ಮಂಗನಿಂದ ಮಾನವನಿಗೆ ಹೇಗೆ ಬಂತು? ಗಂಭೀರವಾಗಿ ಯೋಚಿಸೋ ವಿಶ್ಯ....
 
Post a Comment



<< Home

This page is powered by Blogger. Isn't yours?